ಕರಿಬೇವು ಆರೋಗ್ಯ ರಹಸ್ಯಗಳು

ಕರಿಬೇವು ಭಾರತೀಯ ಮನೆಗಳಲ್ಲಿ ಬಹಳ ಪ್ರಸಿದ್ಧವಾಗಿದೆ. ಹಲವಾರು ವರ್ಷಗಳಲ್ಲಿ ವೈದ್ಯಕೀಯ ಮತ್ತು ಆಹಾರದಲ್ಲಿ ಬಳಸಲ್ಪಟ್ಟಿದೆ.

ಒಂದು ಕುತೂಹಲಕರ ಸಂಗತಿ ಏನೆಂದರೆ ಕರಿಬೇವಿನ ಎಲೆಗಳು ಪೌಷ್ಟಿಕಂಶದಲ್ಲಿ ತುಂಬಾ ಶ್ರೀಮಂತವಾಗಿದೆ

  • ಆರೋಗ್ಯ ಪ್ರಯೋಜನಗಳು

1. ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು

ಕರಿಬೇವಿನ ಸೊಪ್ಪಿನಲ್ಲಿ ನಾರಿನ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಇದು ಬೆಳಗಿನ ಸಮಯದಲ್ಲಿ ಎದುರಾಗುವ ಮಲ ಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆ ಯನ್ನು ಸ್ವಚ್ಛವಾಗಿ ಇರಿಸುತ್ತದೆ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಸೊಪ್ಪನ್ನು ನೆನೆ ಹಾಕಿದ ನೀರು ಕುಡಿಯುವುದರಿಂದ ಅಚ್ಚುಕಟ್ಟಾದ ಕರುಳಿನ ಆರೋಗ್ಯ ಇಡೀ ದಿನ ನಿಮ್ಮದಾಗವಂತೆ ಮಾಡುತ್ತದೆ.

2 . ರಕ್ತ ಶುದ್ಧೀಕರಣ ಮಾಡುತ್ತದೆ

ಕರಿಬೇವಿನ ಸೊಪ್ಪಿನಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳ ಪ್ರಮಾಣ ಹೇರಳವಾಗಿದ್ದು, ರಕ್ತವನ್ನು ಶುದ್ಧೀಕರಣ ಮಾಡುವುದರಲ್ಲಿ ಇದನ್ನು ಬಿಟ್ಟರೆ ಮತ್ತೊಂದಿಲ್ಲ ಎಂದು ಹೇಳುತ್ತಾರೆ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳ ನೀರನ್ನು ಕುಡಿ ಯುವುದರಿಂದ ನಮ್ಮ ಇಡೀ ದೇಹ ಸ್ವಚ್ಛವಾಗುತ್ತದೆ ಜೊತೆಗೆ ನಮ್ಮ ಲಿವರ್ ಆರೋಗ್ಯ ಕೂಡ ಮೊದಲಿಗಿಂತ ಚೆನ್ನಾಗಿರುತ್ತದೆ. ಮೆಟಬಾಲಿಸಂ ಪ್ರಕ್ರಿಯೆ ಚುರುಕಾಗಿ ನಡೆಯಲು ಇದು ಸಹಾಯಕ.

3.ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ಕರಿಬೇವಿನ ಎಲೆಗಳು ನಮ್ಮ ಹೃದಯಕ್ಕೆ ಬಹಳ ಒಳ್ಳೆಯದು ಎಂದು ಅನೇಕ ಸಂಶೋಧನೆಗಳಿಂದ ತಿಳಿದುಬಂದಿದೆ.

ಕರಿಬೇವಿನ ಎಲೆಗಳ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವು ದರಿಂದ ಮೊದಲೇ ಹೇಳಿದಂತೆ ರಕ್ತ ಶುದ್ಧೀಕರಣ ಆಗಿ ಬೇಡದ ಕೆಟ್ಟ ಕೊಲೆಸ್ಟ್ರಾಲ್ ಅಂಶ ದೂರವಾಗಿ ಹೋಗುತ್ತದೆ. ಇದರಿಂದ ರಕ್ತದ ಒತ್ತಡ ಕೂಡ ನಿಯಂತ್ರಣಕ್ಕೆ ಬಂದು ನಮ್ಮ ಹೃದಯಕ್ಕೆ ಯಾವುದೇ ತೊಂದರೆ ಎದುರಾಗುವುದಿಲ್ಲ.

4. ತಲೆ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು

ಇತ್ತೀಚಿನ ದಿನಗಳಲ್ಲಿ 30 ವರ್ಷ ತಲುಪುತ್ತಿದ್ದಂತೆ ತಲೆ ಕೂದಲು ಉದುರಿ ಹೋಗುತ್ತದೆ. ಅಂದರೆ ನಮ್ಮ ತಲೆ ಕೂದಲಿಗೆ ಅಗತ್ಯವಾಗಿ ಬೇಕಾದ ಪೌಷ್ಟಿಕಾಂಶಗಳು ಸಿಗುತ್ತಿಲ್ಲ ಎಂದು ನಾವು ಅರ್ಥಮಾಡಿಕೊಳ್ಳಬೇಕು.

ಆದರೆ ಕರಬೇವಿನ ಎಲೆಗಳಲ್ಲಿ ನಮ್ಮ ತಲೆ ಕೂದಲು ಮತ್ತು ಬೇರು ಗಳಿಗೆ ಅಗತ್ಯವಾಗಿ ಬೇಕಾದ ಎಲ್ಲಾ ಪೌಷ್ಟಿಕಾಂಶಗಳು ಸಿಗುತ್ತವೆ. ಕರಿಬೇವಿನ ಎಲೆಗಳ ನೀರನ್ನು ಕುಡಿಯುವುದರಿಂದ ತಲೆ ಕೂದಲು ಸೊಂಪಾಗಿ ಬೆಳೆಯುತ್ತದೆ. ತಲೆ ಕೂದಲು ಉದುರುವ ಸಮಸ್ಯೆ ಕೂಡ ಕಡಿಮೆ ಯಾಗುತ್ತದೆ.

5. ಚರ್ಮದ ಆರೋಗ್ಯಕ್ಕೆ ಒಳ್ಳೆಯದು:

ಇದಕ್ಕೆ ಕಾರಣ ಕರಿಬೇವಿನ ಸೊಪ್ಪಿನಲ್ಲಿ ಕಂಡುಬರುವಂತಹ ಆಂಟಿ ಆಕ್ಸಿಡೆಂಟ್ ಅಂಶಗಳು. ಇವುಗಳು ನಮ್ಮ ಚರ್ಮದ ಜೀವಕೋಶಗಳನ್ನು ಹಾಳುಮಾಡುವ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುತ್ತವೆ.

ನಿಯಮಿತ ವಾಗಿ ಪ್ರತಿದಿನ ಕರಿಬೇವಿನ ಎಲೆಗಳ ನೀರನ್ನು ಬೆಳಗ್ಗೆ ತಿಂಡಿ ತಿನ್ನುವ ಮುಂಚೆ ಕುಡಿಯುವುದರಿಂದ ನಮ್ಮ ಚರ್ಮದ ಕಾಂತಿ ಹೆಚ್ಚಾಗುತ್ತದೆ ಮತ್ತು ಚರ್ಮದ ಆರೋಗ್ಯ ಕೂಡ ಚೆನ್ನಾಗಿ ರುತ್ತೆ ಎಂದು ಹೇಳುತ್ತಾರೆ.