ಪ್ರತೀಯೊಬ್ಬರಿಗೂ ತಾವು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಆದರೆ, ಸೌಂದರ್ಯ ಕಾಪಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಸುಂದರಿಯಾಗಿ ಕಾಣಬೇಕೆಂದು ರಾಸಾಯನಿಕ ವಸ್ತುಗಳ ಮೊರೆ ಹೋಗುವವರೇ ಹೆಚ್ಚು. ಆದರೆ, ಸೌಂದರ್ಯ ದೀರ್ಘಕಾಲಿಕವಾಗಿ ಉಳಿಯಬೇಕೆಂದರೆ ಮನೆಮದ್ದುಗಳನ್ನು ಬಳಕೆ ಮಾಡುವುದು ಅತ್ಯಂತ ಉಪಯೋಗಕಾರಿ.
- ಒಳ್ಳೆಯ ಆಹಾರ ಪದಾರ್ಥಗಳನ್ನು ಸೇವಿಸಿ
ಕರಿದ ತಿಂಡಿಗಳು, ಸಂಸ್ಕರಿಸಿದ ಆಹಾರಗಳು ಮತ್ತು ಆಮ್ಲಿಯ ಆಹಾರ ಪದಾರ್ಥಗಳು ನಿಮ್ಮ ಚರ್ಮದ ಸೌಂದರ್ಯವನ್ನು ಹಾಳು ಮಾಡುತ್ತವೆ. ಸದಾ ಪೌಷ್ಟಿಕತೆ ತುಂಬಿರುವ ಆಹಾರಗಳ ಸೇವನೆಗೆ ಒತ್ತು ಕೊಡಬೇಕು. ಸಸ್ಯಾಹಾರಿ ಆಹಾರಗಳು ಚರ್ಮದ ಆರೋಗ್ಯ ಮತ್ತು ಹೊಳಪಿಗೆ ಬಹಳ ಸಹಕಾರಿ. ಜೊತೆಗೆ ಆರೋಗ್ಯಕರ ಕೂದಲು ಸಹ ನಿಮ್ಮದಾಗುತ್ತದೆ. ಆದ್ದರಿಂದ ನಿಮ್ಮ ದಿನ ನಿತ್ಯದ ಆಹಾರ ಪದ್ಧತಿಯಲ್ಲಿ ಆದಷ್ಟು ಹೆಚ್ಚಿನ ತರಕಾರಿಗಳನ್ನು ಜೊತೆಗೆ ಹಣ್ಣುಗಳನ್ನು ಬಳಕೆ ಮಾಡಿ. ಹಸಿರು ಎಲೆ – ತರಕಾರಿಗಳ ಮಹತ್ವವನ್ನು ಮರೆಯಬೇಡಿ. ಹಲವಾರು ದ್ವಿದಳ ಧಾನ್ಯಗಳು, ಕಾಳುಗಳು, ಬೀಜಗಳು ನಿಮ್ಮ ಆಹಾರದಲ್ಲಿ ಸೇರಿರಲಿ.
- ಸನ್ ಸ್ಕ್ರೀನ್ ಉಪಯೋಗದ ಬಗ್ಗೆ ತಿಳಿದುಕೊಳ್ಳಿ
ಮನೆಯ ಹೊರಗಡೆ ಹೊರಟಾಗ ಸೂರ್ಯನ ಅತಿ ನೇರಳೆ ಕಿರಣಗಳು ಮುಖದ ಚರ್ಮದ ಕಾಂತಿಯನ್ನು ಹಾಳು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ತುಂಬಾ ಹೊತ್ತು ಸೂರ್ಯನ ಬಿಸಿಲಿಗೆ ಮುಖ ಒಡ್ಡುವುದರಿಂದ ಮುಖದ ಚರ್ಮದ ಮೇಲೆ ಸುಕ್ಕು, ಕಲೆಗಳು ಮತ್ತು ಇನ್ನಿತರ ಚರ್ಮ ಸಂಬಂಧಿತ ಸಮಸ್ಯೆಗಳು ಶುರುವಾಗುತ್ತವೆ. ಇದರಿಂದ ನಿಮ್ಮ ಮುಖದ ಕಾಂತಿ ಸಹಜವಾಗಿಯೇ ಕುಂಠಿತವಾಗುತ್ತದೆ. ಆದ್ದರಿಂದ ಮನೆಯ ಹೊರಗಡೆ ನಿಮ್ಮ ಮುಖದ ಚರ್ಮವನ್ನು ಕಾಪಾಡಿಕೊಳ್ಳುವತ್ತ ಮೊದಲು ಗಮನ ಹರಿಸಿ.
- ನಿತ್ಯ ನಿಯಮಿತ ವ್ಯಾಯಾಮ
ನಿಮ್ಮ ನೈಜ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಪ್ರತಿ ನಿತ್ಯ ವ್ಯಾಯಾಮ ಬಹಳ ಮುಖ್ಯ. ವ್ಯಾಯಾಮದಿಂದ ನಿಮ್ಮ ದೇಹದಲ್ಲಿ ರಕ್ತ ಸಂಚಾರ ಸುಗಮಗೊಳ್ಳುತ್ತದೆ. ವಿಷಕಾರಿ ಅಂಶಗಳು ದೇಹದಿಂದ ಹೊರ ಹೋಗುತ್ತವೆ. ನಿಮ್ಮ ಮಾಂಸ ಖಂಡಗಳು ಮತ್ತು ಮೂಳೆಗಳು ಬಲಗೊಳ್ಳುತ್ತವೆ. ಪ್ರತಿ ದಿನ 30 ನಿಮಿಷಗಳ ಕಾಲ ವಾಕಿಂಗ್, ಜಾಗಿಂಗ್ ಮತ್ತು ಜಿಮ್ ಗೆ ಮೀಸಲಿಡಿ. ಕೆಲ ದಿನಗಳು ಕಳೆದ ನಂತರ ನಿಮ್ಮ ಮುಖದ ಕಾಂತಿಯ ಬಗ್ಗೆ ನೀವೇ ಆಶ್ಚರ್ಯ ವ್ಯಕ್ತಪಡಿಸುವಿರಿ.
- ಮೊಡವೆ ಸಮಸ್ಯೆಗಳು
ಮೊಡವೆ ಬಂದಾಗ ಅದನ್ನು ಚಿವುಟುವುದು ಅಥವಾ ಪದೇ ಪದೇ ಮುಟ್ಟುತ್ತಿರುವುದು ಮಾಡಬಾರದು. ಅದು ಮೊಡವೆಯಲ್ಲಿ ನೋವನ್ನು ಹೆಚ್ಚಿಸುವುದು. ಜೊತೆಗೆ ಇನ್ನಷ್ಟು ಮೊಡವೆಗಳು ಹುಟ್ಟಿಕೊಳ್ಳುವಂತೆ ಪ್ರಚೋದನೆ ನೀಡುವುದು.
ಹರೆಯಕ್ಕೆ ಕಾಲಿಡುತ್ತಿದ್ದಂತೆ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಹಾರ್ಮೋನ್ಗಳ ಬದಲಾವಣೆಯಿಂದ ಮೊಡವೆಗಳು ಏಳುತ್ತವೆ. ಕೆಲವರಿಗೆ ಮೊಡವೆಯು ಅಧಿಕ ಪ್ರಮಾಣದಲ್ಲಿ ಕಾಣಿಸಿಕೊಳ್ಳಬಹುದು. ಇನ್ನೂ ಕೆಲವರಿಗೆ ಮುಖದಲ್ಲಿ ಒಂದು- ಎರಡು ಮೊಡವೆಗಳು ಕಾಣಿಸಿಕೊಳ್ಳಬಹುದು. ಒಮ್ಮೆ ಮೊಡವೆ ಬಂದ ಜಾಗದಲ್ಲಿ ಕಲೆ ಅಥವಾ ಕುಳಿಗಳು ಬೀಳುವುದು. ಮೊಡವೆಯಿಂದ ಉಂಟಾಗುವ ಕುರುಹುಗಳು ಮುಖದ ಸೌಂದರ್ಯವನ್ನು ಹಾಳುಮಾಡುವುದು. ಜೊತೆಗೆ ಆಕರ್ಷಣೆಯನ್ನು ಕುಂದಿಸುವುದು.
ಮೊಡವೆಯ ಹುಟ್ಟು ತುರಿ ತುರಿಯಂತೆ ಏಳುವುದು, ಅತಿಯಾಗಿ ಕೀವು ತುಂಬಿಕೊಳ್ಳುವುದು ಹಾಗೂ ಗುಣವೇ ಆಗದಂತೆ ನಿರಂತರವಾದ ಹುಟ್ಟನ್ನು ಪಡೆದುಕೊಳ್ಳುವ ಪರಿಯಿಂದ ಕೂಡಿರುತ್ತದೆ. ಪದೇ ಪದೇ ಒಂದೇ ಜಾಗದಲ್ಲಿ ಮೊಡವೆಗಳು ಏಳುತ್ತಲೇ ಇದ್ದರೆ ಆ ಜಾಗದಲ್ಲಿ ಚರ್ಮವು ಒರಟಾಗುವುದು. ಮೊಡವೆಯ ವಿಪರೀತ ಸ್ಥಿತಿಯು ಕೆಲವೊಮ್ಮೆ ಮಾನಸಿಕ ಒತ್ತಡ ಹಾಗೂ ಕಿರಿಕಿರಿಯನ್ನು ಉಂಟುಮಾಡುವುದು. ಈ ಕಾರಣಗಳಿಂದ ವ್ಯಕ್ತಿ ಜನರ ಸಮೂಹದಲ್ಲಿ ಬೆರೆಯದೆ ಇರುವುದು ಅಥವಾ ಒಂಟಿಯಾಗಿ ಸಮಯವನ್ನು ಕಳೆಯಲು ಅಭ್ಯಾಸ ಮಾಡಿಕೊಳ್ಳುವ ಸಾಧ್ಯತೆಗಳು ಇರುತ್ತವೆ.
ಮೊಡವೆಯ ಕಾರಣದಿಂದ ಮುಖದಲ್ಲಿ ನೋವಿನ ಸಂವೇದನೆ, ಚರ್ಮ ಒರಟಾಗುವುದು, ಕೊಳೆಗಳು ಸಂಗ್ರಹವಾಗುವುದು, ಸತ್ತ ಜೀವ ಕೋಶಗಳ ಸಂಗ್ರಹ ಹೆಚ್ಚುವುದು, ಕಪ್ಪು ಕಲೆಗಳು ಉಂಟಾಗುವುದು ಹೀಗೆ ವಿವಿಧ ಸಮಸ್ಯೆಗಳಿಂದಾಗಿ ಬೇಸರ ಉಂಟಾಗುವುದು. ಮೊಡವೆ ಬಂದಾಗ ಅದನ್ನು ಚಿವುಟುವುದು ಅಥವಾ ಪದೇ ಪದೇ ಮುಟ್ಟುತ್ತಿರುವುದು ಮಾಡಬಾರದು. ಅದು ಮೊಡವೆಯಲ್ಲಿ ನೋವನ್ನು ಹೆಚ್ಚಿಸುವುದು. ಜೊತೆಗೆ ಇನ್ನಷ್ಟು ಮೊಡವೆಗಳು ಹುಟ್ಟಿಕೊಳ್ಳುವಂತೆ ಪ್ರಚೋದನೆ ನೀಡುವುದು. ಹಾಗಾಗಿ ಮನೆಯಲ್ಲಿ ಸಿಗುವ ನೈಸರ್ಗಿಕ ಉತ್ಪನ್ನಗಳಿಂದ ಆರೈಕೆ ನೀಡಿ. ನೀವು ಬಯಸುವಂತಹ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಿ.
- ದ್ರಾಕ್ಷಿ ಹಣ್ಣಿನ ಬಳಕೆ
ದ್ರಾಕ್ಷಿ ಹಣ್ಣಿನಲ್ಲಿ ಇರುವ ಔಷಧೀಯ ಗುಣವು ಮುಖದ ಮೇಲಿರುವ ಮೊಡವೆಯನ್ನು ನಿಯಂತ್ರಿಸುತ್ತದೆ. ಜೊತೆಗೆ ತ್ವಚೆಯ ಹೊಳಪನ್ನು ಹೆಚ್ಚಿಸುವುದು. ಹಣ್ಣನ್ನು ಬಳಸಿ ಹೇಗೆ ಮೊಡವೆಯನ್ನು ನಿವಾರಿಸುವುದು ನೋಡಿ.
ಮೊದಲಿಗೆ ನಾಲ್ಕೈದು ದ್ರಾಕ್ಷಿ ಹಣ್ಣನ್ನು ತೆಗೆದುಕೊಳ್ಳಿ.
ಅವುಗಳನ್ನು ಮಧ್ಯದಲ್ಲಿ ಕತ್ತರಿಸಿ, ಮುಖದ ಮೇಲೆ ಮೃದುವಾಗಿ ಮಸಾಜ್ ಮಾಡಿ.
ಮೊಡವೆ ಪೀಡಿತ ಪ್ರದೇಶದ ಮೇಲೆ 15-20 ನಿಮಿಷ ಆರಲು ಬಿಡಿ.
ನಂತರ ತಣ್ಣೀರಿನಿಂದ ತೊಳೆಯಿರಿ.
ನಿತ್ಯ ಈ ಕ್ರಮ ಅನುಸರಿಸಿದರೆ ಮೊಡವೆಯಿಂದ ಮುಕ್ತಿ ಪಡೆಯಬಹುದು.
- ಸೌತೆಕಾಯಿ ಮಾಸ್ಕ್
ಸೌತೆಕಾಯಿ ತಂಪು ಹಾಗೂ ಅತ್ಯುತ್ತಮ ಆರೈಕೆಯ ಗುಣ ಹೊಂದಿರುವುದರಿಂದ ಸೌಂದರ್ಯ ವರ್ಧಕ ಚಿಕಿತ್ಸೆಗೆ ಬಳಸಲಾಗುವುದು. ಸೌಂತೆಕಾಯಿ ಬಳಕೆಯಿಂದ ಮೊಡವೆಯನ್ನು ಸಹ ನಿವಾರಿಸಬಹುದು.
ಬೇಕಾಗುವ ಸಾಮಾಗ್ರಿಗಳು:
ಒಂದು ಸಣ್ಣ ಸೌತೆಕಾಯಿ.
ಒಂದು ಕಪ್ ಓಟ್ ಮೀಲ್.
ಒಂದು ಟೀ ಚಮಚ ಮೊಸರು.
ಬಳಸುವ ವಿಧಾನ
ಮೊದಲಿಗೆ ಸೌತೆಕಾಯಿಯ ಸಿಪ್ಪೆಯನ್ನು ತೆಗೆದು, ಮೃದುವಾದ ಪೇಸ್ಟ್ ತಯಾರಿಸಿಕೊಳ್ಳಿ.
ಒಂದು ಕಪ್ ಓಟ್ ಮೀಲ್ ಅನ್ನು ಮೃದುವಾಗಿ ಬೇಯಿಸಿಕೊಳ್ಳಿ.
ಬೇಯಿಸಿದ ಓಟ್ ಮೀಲ್, ಸೌತೆಕಾಯಿ ಪೇಸ್ಟ್ ಮತ್ತು ಒಂದು ಟೀ ಚಮಚ ಮೊಸರನ್ನು ಸೇರಿಸಿ ಮಿಶ್ರಗೊಳಿಸಿ.
ಮೃದುವಾದ ಮಿಶ್ರಣವನ್ನು ಮುಖ ಹಾಗೂ ಪೀಡಿತ ಪ್ರದೇಶಗಳಿಗೆ ಅನ್ವಯಿಸಿ.
30 ನಿಮಿಷಗಳ ಬಳಿಕ ಮೃದುವಾದ ನೀರಿನಿಂದ ಸ್ವಚ್ಛಗೊಳಿಸಿ.
ಈ ಕ್ರಮವನ್ನು ಗಣನೀಯವಾಗಿ ಅನುಸರಿಸುವುದರಿಂದ ಮೊಡವೆಯನ್ನು ಕಡಿಮೆ ಮಾಡಬಹುದು.
- ಅರಿಶಿನದ ಫೇಸ್ ಪ್ಯಾಕ್
ಪುರಾತನ ಕಾಲದಿಂದಲೂ ಸೌಂದರ್ಯ ವರ್ಧಕ ಉತ್ಪನ್ನವನ್ನಾಗಿ ಅರಿಶಿನವನ್ನು ಬಳಸಲಾಗುತ್ತಿದೆ. ನಂಜು ನಿವಾರಿಸುವ, ಕಲೆ ತೆಗೆಯುವ ಹಾಗೂ ಆರೋಗ್ಯಕರ ತ್ವಚೆಯನ್ನು ನೀಡುವ ಶಕ್ತಿಯನ್ನು ಪಡೆದುಕೊಂಡಿದೆ. ಇದರ ಫೇಸ್ ಪ್ಯಾಕ್ ಹೊಂದುವುದರಿಂದ ಮೊಡವೆಯನ್ನು ಸುಲಭವಾಗಿ ನಿವಾರಿಸಬಹುದು.
ಬೇಕಾಗುವ ಸಾಮಾಗ್ರಿಗಳು:
* ಅರ್ಧ ಕಪ್ ಕಡ್ಲೆ ಹಿಟ್ಟು.
* ಟೀ ಚಮಚ ಅರಿಶಿನ.
* ಟೀ ಚಮಚ ಶ್ರೀಗಂಧದ ಪುಡಿ.
* ಸ್ವಲ್ಪ ತುಪ್ಪ ಅಥವಾ ಬೆಣ್ಣೆ.
* ಸ್ವಲ್ಪ ನೀರು.
ಬಳಸುವ ವಿಧಾನ
ಒಂದು ಬೌಲ್ ಅಲ್ಲಿ 2 ಟೀ ಚಮಚ ಅರಿಶಿನ, ಅರ್ಧ ಕಪ್ ಕಡ್ಲೆ ಹಿಟ್ಟು, 2 ಟೀ ಚಮಚ ಶ್ರೀಗಂಧದ ಪುಡಿ, ಸ್ವಲ್ಪ ತುಪ್ಪ ಅಥವಾ ಬೆಣ್ಣೆಯನ್ನು ಸೇರಿಸಿ.
ಮೃದುವಾದ ಮಿಶ್ರಣವನ್ನು ತಯಾರಿಸಲು ಅಗತ್ಯವಾದಷ್ಟು ನೀರನ್ನು ಸೇರಿಸಿ.
ಮಿಶ್ರಣವನ್ನು ಮುಖ ಹಾಗೂ ಪೀಡಿತ ಪ್ರದೇಶಗಳಿಗೆ ಅನ್ವಯಿಸಿ.
5 ರಿಂದ 10 ನಿಮಿಷಗಳ ಕಾಲ ಆರಲು ಬಿಡಿ.
ನಂತರ ಮೃದುವಾಗಿ ಒಮ್ಮೆ ಮಸಾಜ್ ಮಾಡಿ, ಬಳಿಕ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ.
ವಾರಕ್ಕೊಮ್ಮೆ ಈ ಕ್ರಮವನ್ನು ಅನುಸರಿಸಿ ಮೊಡವೆಯನ್ನು ನಿವಾರಿಸಬಹುದು
ಎರಡು ದೊಡ್ಡ ಚಮಚ ಕಡ್ಲೆಹಿಟ್ಟು, ಕೆಲವು ತೊಟ್ಟು ಲಿಂಬೆರದ ಮತ್ತು ಒಂದು ದೊಡ್ಡ ಚಮಚ ಹಾಲಿನ ಕೆನೆ ಇಷ್ಟನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈಗತಾನೇ ಚೆನ್ನಾಗಿ ತೊಳೆದುಕೊಂಡು ಗುಲಾಬಿ ನೀರಿನಿಂದ ಅಥವಾ ಕ್ಲೀನ್ಸರ್ ದ್ರಾವಣದಿಂದ ಒತ್ತಿ ಒರೆಸಿಕೊಂಡ ಮುಖಕ್ಕೆ ಈ ಲೇಪವನ್ನು ಮುಖದ ತುಂಬಾ ಹಚ್ಚಿಕೊಳ್ಳಿ, ಹೊರಗಿವಿಯ ಸಹಿತ. ಸುಮಾರು ಹದಿನೈದರಿಂದ ಮೂವತ್ತು ನಿಮಿಷ ಹಾಗೇ ಒಣಗಲು ಬಿಡಿ. ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಬಳಿಕ ದಪ್ಪ ಟವೆಲ್ಲಿನಿಂದ ಒತ್ತಿ ಒರೆಸಿಕೊಂಡು ಹೊಳೆಯುವ ತ್ವಚೆಯನ್ನು ಗಮನಿಸಿ.